ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ಜನತಾ ಪಾರ್ಟಿ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ಮತ್ತು ಈಗ ಭಾರತದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ. ೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು. ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ‌ ಹಾಗೂ ೨೦೧೯ ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರ ನಡೆಸುತ್ತಿದೆ == ರಾಜಕೀಯ ಮೌಲ್ಯಗಳು == ಕಳೆದ ೪-೫ ದಶಕಗಳಲ್ಲಿ ಬಿಜೆಪಿ ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ ಹಾಗೂ ಇನ್ನಿತರೇ ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ. == ಇತಿಹಾಸ == ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನ ಸಂಘ ೧೯೮೦ರಲ್ಲಿ ಭಾರತೀಯ ಜನತಾ ಪಕ್ಷ ವಾಗಿ ಮರು ನಾಮಕರಣಗೊಂಡಿತು. == ಪದಾಧಿಕಾರಿಗಳು == === ಅಧ್ಯಕ್ಷರು === === ಮುಖ್ಯ ಕಾರ್ಯದರ್ಶಿಗಳು === ಸಂಜಯ್ ಜೊಷಿ ಓಂ ಪ್ರಕಾಶ್ ಠಾಕೂರ್ ತಾವರಚಂದ್ರ ಗೆಹಲೋಟ್ ವಿನಯ್ ಕಟಿಯಾರ್ ಪ್ರಮೋದ್ ಮಹಾಜನ್ === ಖಜಾಂಚಿ === ವೇದ ಪ್ರಕಾಶ ಗೋಯಲ್ == ಭಾರತೀಯ ಜನತಾಪಕ್ಷ ಬೆಳೆದು ಬಂದ ಬಗೆ == ಭಾರತೀಯ ಜನತಾ ಪಕ್ಷದ ಬೆಳವಣಿಗೆ : ಭಾರತೀಯ ಜನತಾ ಪಕ್ಷವು ಭಾರತೀಯ ಜನ ಸಂಘ ಎಂಬ ಹೆಸರಿನಲ್ಲಿ ಬಲ ಪಂಥೀಯ ಪಕ್ಷ ವಾಗಿ ಆರಂಭಗೊಂಡು , ೧೯೭೭ರ ಲ್ಲಿ ಜನತಾ ಪಕ್ಷಸಲ್ಲಿ ವಿಲೀನವಾಗಿ; ಪುನಹ ಅದರಿಂದ ಬೇರೆಯಾಗಿ ೧೯೮೦ ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಪುನರ್ನಮಕರಣ ಹೊಂದಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿತು. ಅದರ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷ ದ ಹೋಲಿಕೆಯೊಂದಿಗೆ ಕೆಳಗೆ ಕಾಣಬಹುದು - (೧೯೭೭ರಲ್ಲಿ ಜನತಾ ಪಾರ್ಟಿ ಸರ್ಕಾರ) ೧೯೫೨,೧೯೫೭,೧೯೬೨,೧೯೬೭,೧೯೭೧ ಭಾರತೀಯ ಜನಸಂಘ (ಪಕ್ಷ == ೧೯೮೪ ರಿಂದ ೨೦೧೪ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ == == ನೋಡಿ == ಭಾರತ ಭಾರತದ ರಾಜಕೀಯ ಪಕ್ಷಗಳು == ಉಲ್ಲೇಖಗಳು == == ಹೊರ ಸಂಪರ್ಕ == ಭಾರತೀಯ ಜನತಾಪಾರ್ಟಿ ಬೆಳೆದು ಬಂದ ಸಂಕ್ಷಿಪ್ತ ಇತಿಹಾಸ; 2018-05-24 ವೇಬ್ಯಾಕ್ ಮೆಷಿನ್ ನಲ್ಲಿ. ಬಿಜೆಪಿ ಬೆಳೆದುಬಂದ ಬಗೆ:; : ' 2 1984 282 2014;| 31, 2018, ‘ವಂಶ ಪಾರಂಪರ್ಯ’? ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಸಾಧ್ಯವೇ?;;ಕೆ.ಎನ್‌. ಹರಿಕುಮಾರ್‌;: 20 ಅಕ್ಟೋಬರ್ 2019, === ಪೂರಕ ಮಾಹಿತಿ === ಅಟಲ್‍ ರಿಂದ ಜೆ.ಪಿ.ನಡ್ಡಾ ವರೆಗೆ:ಬಿಜೆಪಿ ರಾಜಕೀಯ ಪ್ರಗತಿಯ ಹಾದಿ;;: 21 ಜನವರಿ 2020, == ಹೊರ ಪುಟಗಳು == ಅಧಿಕೃತ ತಾಣ 2019-03-12 ವೇಬ್ಯಾಕ್ ಮೆಷಿನ್ ನಲ್ಲಿ. -à- 2006-02-12 ವೇಬ್ಯಾಕ್ ಮೆಷಿನ್ ನಲ್ಲಿ. '